ಕೆದೂರು ಶಾಲಾ ಇಂಟರಾಕ್ಟ್ ಪದಪ್ರಧಾನ ಸಮಾರಂಭ
18/07/2014ರ ಶುಕ್ರವಾರ ನಮ್ಮ ಶಾಲೆಯಲ್ಲಿ 2014-15 ನೇ ಸಾಲಿನ ಇಂಟರಾಕ್ಟ್ ಪದಪ್ರಧಾನ ಸಮಾರಂಭ ಹಮ್ಮಿಕೊಂಡಿದ್ದು ರೊಟರಿ ಕ್ಲಬ್ ಮಿಡ್ ಟೌನ್ ಕುಂದಾಪುರ ಇಲ್ಲಿಯ ಅಧ್ಯಕ್ಷರಾದ ರೋ.ಶ್ರೀ ಕೆ.ಅಬ್ದುಲ್ ಬಶೀರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಶಾಲಾ ಇಂಟರಾಕ್ಟ್ ನೂತನ ಅಧ್ಯಕ್ಷರಾದ ಆಕಾಶ್ ಶೆಟ್ಟಿ ಇವರಿಗೆ ಕೊರಳ ಪಟ್ಟಿ ತೊಡಿಸುವುದರ ಮೂಲಕ ಪದಗ್ರಹಣಗೈದರು.

ಅಲ್ಲದೇ ಇದೇ ಸಂದರ್ಭದಲ್ಲಿ ಕು.ಪ್ರತೀಕ್ಷಾ ಕಳೆದ ವರ್ಷದಲ್ಲಿ ಕ್ಲಬ್ ನ ಕಾರ್ಯಚಟುವಟಿಕೆಯ ವರದಿ ವಾಚಿಸಿದರು.ಕಾರ್ಯಕ್ರಮದಲ್ಲಿ ಇಂಟರಾಕ್ಟ್ ಛೇರ್ಮನ್ ರೋ.ಶ್ರೀ ಚಂದ್ರಶೇಖರ್ ಹೆಗ್ಡೆಯವರು 2013-14 ನೇ ಸಾಲಿನಲ್ಲಿ ಶಾಲೆಯಲ್ಲಿ S.S.L.C. ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಿದರು
ರೋಟರಿ ಮಾಜಿ ಅಧ್ಯಕ್ಷ ರೋ.ಶ್ರೀ ಜಯಪ್ರಕಾಶ್ ಶೆಟ್ಟಿಯವರು ಕ್ಲಬ್ ನ ವಿಮೆಯ ಬಗ್ಗೆ ತಿಳಿಸಿದರು.
No comments:
Post a Comment